Search Blog

Monday, January 07, 2013

ಕೈ ಬೀಸಿ ಕರೆಯುತಿದೆ



ಕೈ ಬೀಸಿ ಕರೆಯುತಿದೆ

ಕೈ ಬೀಸಿ ಕರೆಯುತಿದೆ, ಮನದಾಳದಂಗಳಕೆ
ಇನ್ನಂತು ಇರುಳಿನಲಿ ನಿಂದೇನೆ ಕನವರಿಕೆ
ಈ ಪ್ರೀತಿಯಾ ಸಂಗಾತಿ ನೀನಲ್ಲವೇ
                      ಸಂತೋಷಕೆ ಕಾರಣವು ನಾನಲ್ಲವೇ.     ||  ಕೈ ಬೀಸಿ  ||

ಕನಸಲ್ಲೂ ಮನಸಲ್ಲೂ ನೀ ಕಾಟ ಕೊಡದಿರು
ಆಗಾಗಾ ಕಣ್ಮುಂದೆ ಸದ್ದಿಲ್ದೇ ಕಾಣುತ್ತಿರು.
ನಾನುಪ್ರೀತಿಸಿರೋ ರೀತಿ ಏನಂತ ಹೇಳೋದು
ಇಡೀ ಜನ್ಮ ಕಳೆದೂ ನಿನ್ನ ಬಾಳೆಲ್ಲ ಕಾದು

ಈ ಮನಸಿನ ಮಾತೀಗ ಸಾಕಲ್ಲವೇ
                      ಇನ್ನೇತಕೇ ಸಂತಾಪ ನಾನಿಲ್ಲವೇ.       || ಕೈ ಬೀಸಿ  ||

ಓಹ್ ತುತ್ತಿಲ್ಲಾ ಮುತ್ತಿಲ್ಲಾ ನಿನ್ನಲ್ಲೇ ಇರುವೆ ನಾ
ನೀ ಕೊಟ್ಟಾ ಮನಸುಂಟು ಇನ್ನೆಲ್ಲಿ ಕಳೆಯಲಿ
ಸುಸ್ತು ಇಲ್ದೆ ರಾತ್ರಿಯಿಂದ ಕೇಳುತ್ತ ಮಾಮೂಲೂ
ಕೊಟ್ಟು ಕಳಿಸಿದೆ ನೀನು ಪ್ರೀತಿ ಗೊಂಚಲು

ನಿನ್ ಹೄದಯವೂ ನಂಗೇನೆ ಹೌದಲ್ಲವೇ
                      ಇನ್ನೇತಕೇ ಸಂತಾಪ ನಾನಿಲ್ಲವೇ.       || ಕೈ ಬೀಸಿ  ||


--   RJ  Prabhakar Prabhu.

Friday, December 14, 2012

ಗೆಳತೀ .......



ಗೆಳತೀ .......

ನೀನೊಂದು ಅರ್ಥಕೋಶವಾದಲ್ಲಿ
ನನ್ನನ್ನು ನಿನ್ನ ಜೀವನದಲ್ಲಿ ಸೇರಿಸಿ
ನನಗೂ ಒಂದು ಅರ್ಥ ಕೊಡು.

                                    LovePathi
                              Rj ಪ್ರಭಾಕರ ಪ್ರಭು.

ಪ್ರೀತಿಯ ಕಣ್ಣು



ಮನದ ಭಾವನೆಗಳು ಮರವಾಗಿದೆ
ಪ್ರೀತಿಯ ಬಳ್ಳಿಯದಕ್ಕೆ ಅಪ್ಪಿಕೊಂಡಿದೆ
ಪ್ರೀತಿಯಲಿ ಆಡಿದ್ದ ಮಾತುಗಳ
ಪೋಣಿಸಿ ಕವಿತೆಯಾಗಿಸಿದೆ ಮನಸು
ರಾಗ ತಾಳದಿ ಹಾಡುತಿದೆ ಹೃದಯ
ಕನಸುಗಳೆಲ್ಲವೂ ಒಂದೆಡೆ ಸೇರಿ
ಹರುಷದಿ ನರ್ತನ ಮಾಡುತಿವೆ
ಸಂತೋಷದ ಕ್ಷಣಗಳಿಗೀಗ ರೆಕ್ಕೆ ಬಂದಿದೆ
ಮನದ ಬಾನಂಚಲಿ ಹಾರ ಬಯಸಿದೆ
ಕಣ್ಣಿರದ ಪ್ರೀತಿಗೂ ದೃಷ್ಟಿ ಬಂದಿದೆ
ಪ್ರೀತಿಸುವ ಜೀವಗಳನ್ನದು ಕಾಣ ಬಯಸಿದೆ

                             LovePathi
                              Rj ಪ್ರಭಾಕರ ಪ್ರಭು.

ಮಂಕಾಗಿದೆ ಮನಸ್ಸು




ಪದ ಹುಡುಕುವ ವೇಳೆ
ಬೇಸರ ಮೂಡಿಸುವ ಪದಗಳು
ಕಂಡಿದುದಕ್ಕಾಗಿ
ಕುಂಚವ ಬದಿಗಿಟ್ಟು 
ಪದ ಪುಸ್ತಕವ ಮುಚ್ಚಿ
ಮಂಕಾಗಿ ಕುಳಿತಿದೆ ಮನಸ್ಸು

                                  LovePathi
                              Rj ಪ್ರಭಾಕರ ಪ್ರಭು.

Thursday, December 13, 2012

ಭಾವನೆಯ ಲೇಪನ



ಕನಸಲ್ಲಿ ಕಂಡಂತಿಲ್ಲ ನೀನು
ರಸಿಕತೆಯ ಕುಡಿನೋಟ
ತುಸು ನಾಚಿತ ಮನಸು
ವಯ್ಯಾರದ ನಡೆ
ಕಂಪಿತ ಪಿಸುದನಿ
ಅಂಟಿ ಕೂರುವ ಕಾಯ
ಹೂವಂತೆ ಮೃದು ಸ್ಪರ್ಷ
ಕಣ್ಣಂಚಿನ ಸೆಳೆತ
ಸುಮಧುರ ಬಾಹು ಬಂಧನ
ಮಧುರಾಮೃತ ,ಚುಂಬನ
ಮತ್ತಿರುವ ಮಾತು
ಮಧ್ಯೆ ಮತ್ಸ್ಯದ ನಗು,
ಮನದಣಿದ ಇಬ್ಬನಿಯಂತೆ
ಮಧುವ ಹೀರುವ ಕಾಮಿನೀ
ಕ್ಷಣ ಮರೆಸುವ ಹಂಸಿನಿ
ನಲುಮೆಯಾ ನಲಿವು
ಸರ ಸದಾ ಹಸಿವಲ್ಲಿ
ಕನಸೊಂದು ನೆಪವಿಲ್ಲಿ
ನನಸಾಗೊ ಕ್ಷಣಕಾಗಿ
ಕಾದಿದ್ದ ನನಗೀಗ
ಭಾವನೆಯ ಲೇಪನ
_____________Rj ಪ್ರಭಾಕರ ಪ್ರಭು .

ನನ್ನಾಕೆ ಚಂದಿರ



ಚಂದಿರನ ನನ್ನಾಕೆಗೆ ಹೋಲಿಸಿದ್ದೆ
ಅಷ್ಟೊಂದು ಸುಂದರವೆಂದರಿತಿದ್ದೆ
ಚಂದಿರನಾಣೆಗೂ ನಿಜ ಸುಂದರ
ಆಗಿರುವಳೀಗ ನಿಜಕ್ಕೂ ಚಂದಿರ

ಅವಳ ಪ್ರೀತಿಗಿಂದು ಅಮವಾಸ್ಯೆ
ಇಂದವಳ ಪ್ರೀತಿ ಯ ಪಡೆಯುವಾಸೆ
ಕಾದಿರುವೆನವಳ ತುಂಬು ಪ್ರೀತಿಗೆ
ನನ್ನ ಬಾಳಿನ ಬೆಳದಿಂಗಳಿಗೆ

ಪಕ್ಷಪಾತ ನನ್ನಾಕೆಗಿಲ್ಲ
ಪಾಕ್ಷಿಕವಾಗಿ ಪ್ರೀತಿಸುವಳಲ್ಲಾ
ಹುಣ್ಣಿಮೆ ದಿನದ ಪ್ರೀತಿ ನನಗಿಷ್ಟ
ಅಮವಾಸ್ಯೆ ಎಂದರದೇಕೋ ಕಷ್ಟ

__________________Rj ಪ್ರಭಾಕರ ಪ್ರಭು .