Search Blog

Tuesday, November 09, 2010

ಕಾಣಲು - ಕಾಡಲು - ಕದಡಲು.

ಬೆಳದಿಂಗಳಿರುಳಿನಲಿ ನೀ ನನ್ನ ಕಾಣಲು,
ಬಿಳಿತಿಂಗಳಿನುದಯದಲಿ ನಾ ನಿನಗೆ ಸಿಗಲು,
ಕಂಗಳಂಚಿನಲಿ ನನ್ನ ಪ್ರೀತಿಯ ಬೇಡಲು,
ಹ್ರದಯದಂಗಳಕೆ ಅಡಿಯಿಟ್ಟೆ ನೀ ನನ್ನ ಕಾಡಲು
ತಂಗಾಳಿ ಬೀಸುತಿಹ ಈ ಮನವ ಕದಡಲು.

Sunday, November 07, 2010

ನಾನೂ ನನ್ನ ಗೆಳತಿ

ನಿನ್ನ ಪ್ರೀತಿಯ ಗೆಳತಿ ನನಗ್ ಹಿಡಿಸಿ,
sms ಮಾಡಿ ಮಾಡಿ ನಿದ್ದೆ ಕೆಡಿಸಿ,
ಇಂದ್ಯಾಕೆ ನನ್ನ ಮ್ಯಾಲೆ ಸಿಟ್ಟುಗೊಂಡೆ,
ಬ್ಯಾರೇ ಹುಡುಗನ ನಂಬರ್ ಹಿಡ್ಕೊಂಡೆ..

Facebook - ದೀಪಾವಳಿ ವಿಶೇಷ.

ಈ ದೀಪಾವಳಿಯಲ್ಲಿ ನೀನು
ಫೇಸ್ ಬುಕ್ ನಲ್ಲಿ login ಆಗು
ಹುಡುಗಿ ಹೆಸರಲ್ಲಿ Account ಮಾಡ್ಕೊ,
ಲೈಫು ಇಷ್ಟೇನೇ.....

ಹುಡುಗರ ಫ್ರೆಂಡ್ ಶಿಪ್ ಮಾತ್ರ ಮಾಡ್ಕೊ,
ಕನ್ನಡ ಕನ್ನಡ ಅಂತ ಹೇಳ್ಕೊಂಡ್,
ಇಂಗ್ಲೀಷ್ ನಲ್ಲೇ ಬರೀತಾ ಹೋಗು,
ಲೈಫು ಹಿಂಗೇನೇ.......

ಹುಡುಗರಿಗೆಲ್ಲಾ ಆಟ ಆಡ್ಸು,
ಸಾವಿರ ಸಾವಿರ ಫ್ರೆಂಡ್ಸ್ ಆದ್ಮೇಲೆ,
Hi ಅಂದೋರ್ಗೆ Bye ಅನ್ನು,
ನಿನ್ನ ಕೆಲ್ಸ ಇಷ್ಟೇನೇ.......
........................................RJ ಪ್ರbhakar ಪ್ರbhu.