Search Blog

Thursday, June 23, 2011

ನಯನ - ನೇತ್ರ

ಕೋಪ ಕಾಡಿ ಕಪಿಯಂತೆ ಕಟಕಟನೆ ಕಡಿವ,
ಕರೆದು ಕಣ್ಣಲ್ಲೇ ಕೊಲ್ಲುವ ಕಾತರ,
ಕಂಬನಿಯಲಿ ಕಾಯಿಸಿ ಕರಿವ,
ನಿಂತ ನೀರ ಕದಡುವ,
ನೆಲೆ ನಿಂತರೆ ಕಬಳಿಸುವ,
ನೆನೆದವರೊಡನೆ ನಡೆದಾಡುವ,
ನೆರಳಂತೆ ಹಿಂಬಾಲಿಸುವ,
ನಯನದಲೇ ನಗುವ,
ನಸು ನಾಚಿ ನಗಿಸುವ,
ನನ್ನೊಲವಿನ "ನೇತ್ರ"
                                           
                                                                      --------RJ ಪ್ರಭಾಕರ ಪ್ರಭು.

Wednesday, June 22, 2011

ಮನೋವೇದನೆ.....ರೋದನೆ

ಮನೋವೇದನೆಯ ತೊಳಲಾಟ,
ಮನ - ಮೌನದ ಒಡನಾಟ,
ನಡುವೆ ನಗುವಿನ ಓಲಾಟ,
ಮತ್ತೆ ಮಾತಿನ ಪಲ್ಲಟ.

ಮಾತು - ಮೌನದ ಜೂಜಾಟ,
ಹಳೆದು ಹೊಸತುಗಳ ಜಂಜಾಟ,
ಅಲ್ಲಿ ಹೃದಯಗಳ ತೇಲಾಟ,
ದೇಹಗಳಿಗಿದುವೆ ಚೆಲ್ಲಾಟ.
--------RJ ಪ್ರಭಾಕರ ಪ್ರಭು.








ದೀಪದ ಬಾಳು ---- ದೀಪು M ಸ್ವಾಮಿಗಾಗಿ

ದೇವರಾಟದಂತೆ ಆಡುತಿದೆ ದೀಪ
ಮನಸಿಲ್ಲದೆ ಉರಿಯುತಿದೆ ದೀಪ
ಬರಿದಾಗಿ ಬಳಲುತಿದೆ ದೀಪ
ತೋಡಿಕೊಳ್ಳಲು ತೊಳಲುತಿದೆ ದೀಪ.
ಭಾವನೆಗೆ ಸ್ಪಂದಿಸುವ ದೀಪ
ಭಾವುಕತೆ ತೋರಿಸಿದೆ ದೀಪ
ಕತ್ತಲಲಿ ಕುಳಿತ ದೀಪ
ಜಗಕೆ ತೋರಿದೆ ಬೆಳಕ -- ಈ ದೀಪ.
ಮನದಲ್ಲಿಯೂ ಮನೆ ಮಾಡಿದ ದೀಪ
ಮರೆಯಾಗಲು ಮರೆಯುವ ದೀಪ
ಮಾತಾಆಡಲು ಮನಸಾಗಿದೆ ದೀಪ
ಮುತ್ತಿಡುವ ಮನಸಲ್ಲಿದೆ ದೀಪ.
-------- RJ ಪ್ರಭಾಕರ ಪ್ರಭು.

ಮಮತೆಯ ಕಣ್ಣೀರು....

ಮನದ ಮೋಡ ಕರಗಿ ಮಳೆಯಾಗಿ,
ಹನಿಯುತಿದೆ ಕಣ್ಣೀರ ಧಾರೆಯಾಗಿ..
ಮಮತೆಯ ಮಾತಲ್ಲೇ ಅಪ್ಪಿದುದರ ಫಲವಾಗಿ....
--------------- RJ ಪ್ರಭಾಕರ ಪ್ರಭು.



ಭಾವ ’ನೆ’...

ನಾಟಕದ ಸುರಿಮಳೆ
ನನ್ನಲ್ಲಿ ನುಡಿದವಳೇ
ನೀ ಬಾ ಎಂದವಳೇ
ನೋಡೋಣ ಎಂದಳೇ
ಮಾತಿಗೆ ತಪ್ಪಿದಳೇ
ಮಾತಾಡದೇ ಕುಳಿತಳೇ
ಮಾತಾಡಲು ಮರೆತಳೇ
ಗೆಳೆತನ ತೊರೆದಳೇ..
................................RJ ಪ್ರಭಾಕರ ಪ್ರಭು.

ಕಾವ್ಯ - ಳಿಗಾಗಿ ಈ ಕಾವ್ಯ.

ಕನಸಿನ ಕಡಲಲ್ಲಿ ಕದತೆರೆದು ಕಾವ್ಯಳು ಕವಲೊಡೆದು
ಕವಿಗೆ ಕೈನೀಡಿ ಕವಿತೆಯಾಗಿ ಕುಳಿತಳು..
................... RJ ಪ್ರಭಾಕರ ಪ್ರಭು.

ಮಮತ - ಳಿಗಾಗಿ

ಮಾತಾಡಲು ಮನಸ್ಸಿಲ್ಲ
ಮರೆಯಲು ಮನಸ್ಸೊಪ್ತಿಲ್ಲ
ಮೌನಿಯಾಗಿ ಮುನಿಯುತ್ತಾಳಲ್ಲಾ
ಮನಸಲ್ಲೇ ಮನೆ ಮಾಡಿದಳಲ್ಲಾ
ಮತ್ತೆ ಮರೆತು ಮರೆಯಾದಳಲ್ಲಾ
ಮಾತಾಡದೇ "ಮಮತ"
                                                                                         --- RJ ಪ್ರಭಾಕರ ಪ್ರಭು.


ಮೌನಿ

    ಮಮತಾಳ ಮಧುರವಾದ ಮಾತಿನ ಮೋಡಿಗೆ
    ಮನಸೋತ ಮಾಮರವೇ ಮೂಕವಾದಾಗ
    ಮನದಲ್ಲಿ ಮೌನರಾಗ ಮೂಡಿದೆ........ "ಮೌನಿ"
RJ ಪ್ರಭಾಕರ ಪ್ರಭು.

ಪ್ರೀತಿಯ ಹುಟ್ಟು --


·         ಕಾರಣವಿಲ್ಲದೇ ತೋರಣ ಕಟ್ಟಿದೆ
ನನ್ನೀ ಹೃದಯದ ಬಾಗಿಲಿಗೆ....
        ಭೀತಿಯಿಲ್ಲದೇ ಪ್ರೀತಿಯು ಮುಟ್ಟಿದೆ
                ನನ್ನೀ ಮನಸಿನ ಅಂಗಳಕೆ....

        ಇಟ್ಟಿಗೆಯಿಲ್ಲದೇ ಕನಸ ಕಟ್ಟಿದೆ
                ಎಚ್ಚರವಿಲ್ಲದ ವೇಳೆಯಲಿ...
        ಕನಸಿನ ಗೂಡನು ಮುಟ್ಟದೇ ತಟ್ಟಿದೆ
                ಒಳ್ಳೆನಿದ್ದೆಯ ಸಮಯದಲಿ...

        ದೂರ ನಿಲ್ಲದೇ ಹತ್ತಿರ ಸುಳಿದಿದೆ
                ಸಿಗದೇ ಬೇರೆ ಊರಿನಲಿ..
        ಪ್ರೀತಿಯಿಂದಲೇ ಪಕ್ಕಕೆ ಕರೆದಿದೆ
                ಮೂಕವಾಗಿಹ ಮನಸಿನಲಿ..

        ಬಿಡಲಾರೆ ನಿನ್ನ ಇನ್ನೆನ್ನುತಾ
                ಆವರಿಸಿದೆ ನನ್ನ ಪ್ರೀತಿಯಲಿ.
        ಈ ಪ್ರೀತಿಯೇ ಹೀಗೆನ್ನುತಾ
                ಅಪ್ಪಿಕೊಂಡೆನು ನಾ ಸ್ನೇಹದಲಿ.

Dedicated to Deepu M Swamy

ಕಾಣದಿಹ ದಾರಿಗೆ ಆಗು ದಾರಿ ದೀಪ
ಕತ್ತಲ ಬಾಳಿಗೆ ಬೆಳಕಾಗಿ ಬಂದ ದೀಪ

ನಿನಗಿಡುವೆ ಪ್ರೀತಿಯ ಆರದಾ ದೀಪ
ಜೀವದ ಗೆಳತಿಯಾಗಿಹೆ ನೀ ಮುದ್ದು ದೀಪ

ಮಾತಲ್ಲೇ ಹಚ್ಚಿದೆ ಧೈರ್ಯದಾ ದೀಪ
ಮನಸು ಮೆಚ್ಚಿದ ಮುತ್ತಿನಾ ದೀಪ
                                                                     RJ ಪ್ರಭಾಕರ ಪ್ರಭು.





ಅಲ್ಲೋಲಾ ಕಲ್ಲೋಲಾ


            ಅಲ್ಲೋಲಾ ಕಲ್ಲೋಲಾ
ಮನಸ್ಸಲ್ಲಿ ಎಲ್ಲಾ
ನೀನಿಲ್ದೇ ಏನಿಲ್ಲಾ
ಓ ಎನ್ನ ಲೀಲಾ
ಮುತ್ತಿಟ್ಟೊಡೋಗಲ್ಲಾ
ಕೊಡುತೀಯಾ ಗಲ್ಲಾ

ನಾನೇ ಕಣೇ ನಿನ್ ನಲ್ಲಾ
ನಾಚ್ಕೋತಿದಿಯಲ್ಲಾ
ಸಾಕೀಗ ಅಂತ್ಯಲ್ಲಾ
ಶುರುಮಾಡೇ ಇಲ್ಲಾ
ನಿನಗ್ಯಾಕೆ ಮನಸ್ಸಿಲ್ಲಾ
ಕಲ್ಲಾದೆಯಲ್ಲಾ

ಸಂಕೋಚವೆಂಬುದೆನಗಿಲ್ಲಾ
ಸಂತಾಪ ತೋರುತಿಹೆಯಲ್ಲಾ
ಆಗಸದಂತೆ ನೀ ಲೀಲಾ
ಬಣ್ಣವೊಂದೇ ತಿಳಿ ನೀಲಾ
ಆದರೂ ಕದಡಿಹೆಯಲ್ಲಾ
ಬಂದು ಬಾಳಲ್ಲೆಲ್ಲಾ...