Search Blog

Monday, October 17, 2011

ಮಾತು ಮರೆತ ಮನಸು

ಮನಸಿನ ಮೂಲೆಯಲ್ಲಿ ಮರೆಯಾಗಿದ್ದ ಮಾತು ಮತ್ತೆ ಮರುಕಳಿಸಿ...
ಮರೆಯಿಂದ, ಮರುಳಾದ ಮಾನವನ ಮೆಲುದನಿಯಲಿ ಮಾತನಾಡಿಸಿ...
ಮೌನವಾಗಿದ್ದವನಿಗೆ ಮಾತಲ್ಲಿ ಮತ್ತೇರಿಸುವ ಮುತ್ತು ಮರೆಸಿದೆ.
--------------------RJ Prabhakar Prabhu.



Saturday, October 15, 2011

ರೇಖಾಳ ಹನಿಗವನ ನಲ್ಲನಿಗಾಗಿ


nee nanna maretheyendu
ninna naa mareyale
nee nanna thoredheyendu
ninna naa thoreyale
nee maadida mosavannu
ninagu naa maadale
naa ninna nijava thilidilla
nee nanna ihava thorede oo nalla

ಮೂಲ  = Rose Honey .....  ತಿದ್ದುಪಡಿ = RJ Prabhakar Prabhu.

Monday, October 10, 2011

ಅಳುತ್ತಿದ್ದ ಮನದ ಮಾತು

ಅಣ್ಣಾ ಎಂದಳಾಕೆ ಆವತ್ತು

ಕೊಟ್ಟೆ ನಾ ಆಕೆಗೊಂದು ಮುತ್ತು

ಮುನಿದಳಾಕೆ ಅದನ್ನ ಪಕ್ಕಕ್ಕಿತ್ತು

ಅವಳ ಮನಸೇ ನನ್ನಲ್ಲಿ ಹೇಳಿತ್ತು

ನಿನಗಿದು ಯಾಕೆ ಬೇಕಿತ್ತು

ನಿಜವಾಗಿಯೂ ಜಾಸ್ತಿಯಾಗಿತ್ತು

ಏನು ಮಾಡಲಿ ನನ್ನ ಪ್ರೀತಿ ಹಾಗಿತ್ತು

ನನಗೂ ಬೇಸರವಾಗಿತ್ತು

ಮನಸಂತೂ ಮಂಕಾಗಿತ್ತು

ಯೋಚಿಸುತಾ ಮಲಗಿತ್ತು

ಬೇಸರದಿ ಅಳು ಬಂದಿತ್ತು

ತಿಳಿಯುವಷ್ಟರಲ್ಲಿ ಬೆಳಗಾಗಿತ್ತು

.................................RJ Prabhakar Prabhu.

Thursday, October 06, 2011

ಅವಳ ಮಾತು


ಮುಚ್ಚಿಡಲು ಬಾರದು
ಬಿಚ್ಚಿ ಹೇಳಲು ಬಾರದು
ಅನ್ನುವಂಥ ಮನಸವಳದು


ಗೆಳೆತನವ ಬಿಡಲುಬಾರದು
ಬೇರ್ಯಾರನು ಸೇರಿಸಬಾರದು
ಎನ್ನುವ ಕನಸವಳದು


ನಾನಿಷ್ಟ ಪಡಬಾರದು
ನಾನೇನೂ ಬರೆಯಬಾರದು
ಅವಳಾಡುವ ಮಾತದು

........................RJ Prabhakar Prabhu.

Tuesday, October 04, 2011

ಸ್ವರ - ಸಮಾಗಮ.

ಸರಾಗ ರಾಗ ಸಂಗ
ಸನಿಹದಲಿರಲಿ ತರಂಗ
ಸರಿಗಮದಂತರಂಗ
ಸ್ವರವಿರಲು ಸತ್ಸಂಗ
ಸರಿಯವವ ದೂರ ಭಂಗ.
......................RJ Prabhakar Prabhu.