Search Blog

Friday, December 14, 2012

ಗೆಳತೀ .......



ಗೆಳತೀ .......

ನೀನೊಂದು ಅರ್ಥಕೋಶವಾದಲ್ಲಿ
ನನ್ನನ್ನು ನಿನ್ನ ಜೀವನದಲ್ಲಿ ಸೇರಿಸಿ
ನನಗೂ ಒಂದು ಅರ್ಥ ಕೊಡು.

                                    LovePathi
                              Rj ಪ್ರಭಾಕರ ಪ್ರಭು.

ಪ್ರೀತಿಯ ಕಣ್ಣು



ಮನದ ಭಾವನೆಗಳು ಮರವಾಗಿದೆ
ಪ್ರೀತಿಯ ಬಳ್ಳಿಯದಕ್ಕೆ ಅಪ್ಪಿಕೊಂಡಿದೆ
ಪ್ರೀತಿಯಲಿ ಆಡಿದ್ದ ಮಾತುಗಳ
ಪೋಣಿಸಿ ಕವಿತೆಯಾಗಿಸಿದೆ ಮನಸು
ರಾಗ ತಾಳದಿ ಹಾಡುತಿದೆ ಹೃದಯ
ಕನಸುಗಳೆಲ್ಲವೂ ಒಂದೆಡೆ ಸೇರಿ
ಹರುಷದಿ ನರ್ತನ ಮಾಡುತಿವೆ
ಸಂತೋಷದ ಕ್ಷಣಗಳಿಗೀಗ ರೆಕ್ಕೆ ಬಂದಿದೆ
ಮನದ ಬಾನಂಚಲಿ ಹಾರ ಬಯಸಿದೆ
ಕಣ್ಣಿರದ ಪ್ರೀತಿಗೂ ದೃಷ್ಟಿ ಬಂದಿದೆ
ಪ್ರೀತಿಸುವ ಜೀವಗಳನ್ನದು ಕಾಣ ಬಯಸಿದೆ

                             LovePathi
                              Rj ಪ್ರಭಾಕರ ಪ್ರಭು.

ಮಂಕಾಗಿದೆ ಮನಸ್ಸು




ಪದ ಹುಡುಕುವ ವೇಳೆ
ಬೇಸರ ಮೂಡಿಸುವ ಪದಗಳು
ಕಂಡಿದುದಕ್ಕಾಗಿ
ಕುಂಚವ ಬದಿಗಿಟ್ಟು 
ಪದ ಪುಸ್ತಕವ ಮುಚ್ಚಿ
ಮಂಕಾಗಿ ಕುಳಿತಿದೆ ಮನಸ್ಸು

                                  LovePathi
                              Rj ಪ್ರಭಾಕರ ಪ್ರಭು.

Thursday, December 13, 2012

ಭಾವನೆಯ ಲೇಪನ



ಕನಸಲ್ಲಿ ಕಂಡಂತಿಲ್ಲ ನೀನು
ರಸಿಕತೆಯ ಕುಡಿನೋಟ
ತುಸು ನಾಚಿತ ಮನಸು
ವಯ್ಯಾರದ ನಡೆ
ಕಂಪಿತ ಪಿಸುದನಿ
ಅಂಟಿ ಕೂರುವ ಕಾಯ
ಹೂವಂತೆ ಮೃದು ಸ್ಪರ್ಷ
ಕಣ್ಣಂಚಿನ ಸೆಳೆತ
ಸುಮಧುರ ಬಾಹು ಬಂಧನ
ಮಧುರಾಮೃತ ,ಚುಂಬನ
ಮತ್ತಿರುವ ಮಾತು
ಮಧ್ಯೆ ಮತ್ಸ್ಯದ ನಗು,
ಮನದಣಿದ ಇಬ್ಬನಿಯಂತೆ
ಮಧುವ ಹೀರುವ ಕಾಮಿನೀ
ಕ್ಷಣ ಮರೆಸುವ ಹಂಸಿನಿ
ನಲುಮೆಯಾ ನಲಿವು
ಸರ ಸದಾ ಹಸಿವಲ್ಲಿ
ಕನಸೊಂದು ನೆಪವಿಲ್ಲಿ
ನನಸಾಗೊ ಕ್ಷಣಕಾಗಿ
ಕಾದಿದ್ದ ನನಗೀಗ
ಭಾವನೆಯ ಲೇಪನ
_____________Rj ಪ್ರಭಾಕರ ಪ್ರಭು .

ನನ್ನಾಕೆ ಚಂದಿರ



ಚಂದಿರನ ನನ್ನಾಕೆಗೆ ಹೋಲಿಸಿದ್ದೆ
ಅಷ್ಟೊಂದು ಸುಂದರವೆಂದರಿತಿದ್ದೆ
ಚಂದಿರನಾಣೆಗೂ ನಿಜ ಸುಂದರ
ಆಗಿರುವಳೀಗ ನಿಜಕ್ಕೂ ಚಂದಿರ

ಅವಳ ಪ್ರೀತಿಗಿಂದು ಅಮವಾಸ್ಯೆ
ಇಂದವಳ ಪ್ರೀತಿ ಯ ಪಡೆಯುವಾಸೆ
ಕಾದಿರುವೆನವಳ ತುಂಬು ಪ್ರೀತಿಗೆ
ನನ್ನ ಬಾಳಿನ ಬೆಳದಿಂಗಳಿಗೆ

ಪಕ್ಷಪಾತ ನನ್ನಾಕೆಗಿಲ್ಲ
ಪಾಕ್ಷಿಕವಾಗಿ ಪ್ರೀತಿಸುವಳಲ್ಲಾ
ಹುಣ್ಣಿಮೆ ದಿನದ ಪ್ರೀತಿ ನನಗಿಷ್ಟ
ಅಮವಾಸ್ಯೆ ಎಂದರದೇಕೋ ಕಷ್ಟ

__________________Rj ಪ್ರಭಾಕರ ಪ್ರಭು .

ಮನಸೇತಕೆ ಮಂಕಾಗಿದೆ



ಮನಸೇತಕೆ ಮಂಕಾಗಿದೆ
ಮುನಿಸೇತಕೆ ಮನನೋಯಿಸಿದೆ
ಮನಬಂದಂತೆ ಆಟವಾಡುತಿದೆ

ಮುಂಜಾನೆಯೇ ಮೌನವಹಿಸಿದೆ
ಮಾಸಿರದ ನೆನಪು ಕಾಡಿದೆ
ಮಮಕಾರವ ಮರೆತು ನಿಂತಿದೆ


______________Rj ಪ್ರಭಾಕರ ಪ್ರಭು .

ಪರಿಸ್ಥಿತಿ



ಪ್ರಪಂಚದಲ್ಲಿರೋರು ಯಾರು ಕೆಟ್ಟವರಲ್ಲ
ಪರಿಸ್ಥಿತಿ ಒಮ್ಮೊಮ್ಮೆ ಕೆಟ್ಟವರನ್ನಾಗಿ ಮಾಡುತ್ತದೆ
                                                                                 

                                                         ---------- Rj ಪ್ರಭಾಕರ ಪ್ರಭು.

ನನ್ನೋಳು ನನಗೆ




ನನ್ನೋಳು ಕಾಣದೇ ಹೋದರೆ ಏನಿದು ಗಲಿಬಿಲಿ..........ಯಾಕಿದು ಚಳಿ ಚಳಿ
ನಾ ಯಾರ ಕಂಡರೂ ಅವಳನೇ ಯೋಚಿಸಿ ತಳಮಳ..........ಹೃದಯದ ಕಳವಳ
ಕಟ್ಟಿಡುವಳು....ಮುಚ್ಚಿಡುವಳು.....ಒಪ್ಪಿಗೆ ನೀಡುತಾಳೆ ರೆಪ್ಪೆಯಲ್ಲಿಯೇ

ನನ್ನೋಳ ಕಣ್ಣುಗಳು ನಾನಾದರೇ..........ನಾ ಕಾಣೋ ನೋಟವೆಲ್ಲಾ ಅವಳಾದಳು
ನನ್ನೋಳ ಎದೆಬಡಿತ ನಾನಾದರೇ..........ನನ್ನೆಲ್ಲಾ ಪದಸ್ಪೂರ್ತಿ ಅವಳಾದಳು
ನನ್ನೋಳು ಹಾಡುವಾಗ ನಾನವಳ ಪಲ್ಲವಿ
ನನ್ನೋಳೇ ನನ್ನಾ ಸಂಗೀತಾ..........
ತನನಂ ತನನಂ ಸಿಂಚನ ನನ್ನವಳು.......... || ನನ್ನೋಳು ||

ನನ್ನೋಳ ಭಾವನೆಯು ನಾನಾದರೇ..........ನನ್ನಾ ಈ ಒಳಮನಸು ಅವಳಾದಳು
ನನ್ನೋಳ ಉಸಿರಾಟ ನಾನಾದರೇ..........ನನ್ನೆಲ್ಲಾ ಉಚ್ವಾಸ ಅವಳಾದಳು
ನನ್ನೋಳು ಆಡುವಾಗ ನಾನವಳ ಆಟಿಕೆ
ನನ್ನೋಳೇ ನನ್ನಾ ಕೈಸೆರೆ..........
ಸರಿಗಮಪದನಿಸ ಚುಂಬನ ನನ್ನವಳು.......... || ನನ್ನೋಳು ||


                                                          RJ ಪ್ರಭಾಕರ ಪ್ರಭು
                                                           ೧೭/೦೨/೨೦೧೨

Friday, December 07, 2012

ಒಂಟಿ ಹೃದಯ


ಒಂಟಿ ಹೃದಯವು ಇಂದು
ತುಂಟತನದಿ ಹಾಡಿದೆ
ಕಾಡಿರುವ ಕನಸುಗಳ
ಜೋಡಿಯಾಗಿಸ ಬಯಸಿದೆ
ಒಬ್ಬಂಟಿ ಮನಸುಗಳ
ಸಾಂಗತ್ಯಕೆ ಕರೆದಿದೆ
ಕೋಪಗೊಂಡ ಭಾವಗಳಿಗೆ
ಸಾಂತ್ವಾನವ ಸೂಚಿಸಿದೆ
ಏಕಾಂಗಿ ಬದುಕನ್ನು
ಹುಸಿಯಾಗಿಸ ಹೊರಟಿದೆ
ಕಲ್ಪನೆಯ ಲೋಕದಲಿ
ಬದುಕಲು ಪ್ರಯತ್ನಿಸಿದೆ 



____________Rj ಪ್ರಭಾಕರ ಪ್ರಭು .

Thursday, December 06, 2012

ಮೌನ ಬೇಲಿಯ ಒಳಗೆ ಮಾತಿನ ಮಂಟಪ



ಕನಸಿನ ಗೋಪುರ ಕಟ್ಟಿದ್ದೆ
ಮನಸಿನ ಅಂಗಳದಿ
ಅದರೊಳಗೆ ಬಚ್ಚಿಟ್ಟು ನಿನ್ನ
ಪ್ರೀತಿಯಲಿ ಪೂಜಿಸಿದೆ
ನೆನಪುಗಳ ನೆಪ ತೋರಿ
ನಿನ್ ತನವ ಸಾಧಿಸಿದೆ
ಗರಿಬಿಚ್ಚಿ ಗೂಡಬಿಟ್ಟು
ಹಾರಾಡಲು ಹಂಬಲಿಸಿದೆ
ಹರಿಹಾಯ್ದು ನನ್ನಿಂದ
ದೂರಾಗಲು ಬಯಸಿದೆ
ಕೋಪದ ಪದಗಳನು
ನನಗೆಂದೇ ಆಹ್ವಾನಿಸಿದೆ
ಪ್ರೀತಿಸಿದ ಪ್ರತಿಫಲವ
ಬೀದಿ ಪಾಲಾಗಿಸಿದೆ
ಮಾತಿನ ಮುಖದ್ವಾರೆಕೆ
ಮೌನದ ಬೀಗ ಜಡಿದೆ
ಮೌನ ಬೇಲಿಯ ಒಳಗೂ
ಕಟ್ಟುವೆನು ಮಾತಿನಾ ಮಂಟಪ .

_________   Rj ಪ್ರಭಾಕರ ಪ್ರಭು .

Wednesday, December 05, 2012

ಬಾ ಮಳೆಯೇ ಬಾ



ಬಾ ಮಳೆಯೇ ಬಾ

ಅವಳಿಗೆ ನನ್ನ ನೆನಪಾಗುವವರೆಗೆ
ತಿರುಗಿ ನನ್ನ ನೋಡೋವರೆಗೆ
ಹಿತವಾದ ಸ್ಪರ್ಷಕೆ ಕರೆಯುವವರೆಗೆ
ಬಿಸಿಯುಸಿರಲಿ ಬಂಧಿಸುವವರೆಗೆ
ಚಳಿಯಾಗಿಯೂ ಬೆವರುವವರೆಗೆ
ನಿನ್ನೊಡನೆ ಸೇರಿದ ನೆನಪವಳ ಕಾಡುವವರೆಗೆ
ಸುಮಧುರ ಕ್ಷಣಕೆ ಬೇಡುವವರೆಗೆ
ನಲುಮೆಯಿಂದಲಿ ನನ್ನ ಸೇರುವವರೆಗೆ
ಪ್ರೀತಿಯ ಸೆಲೆ ತುಂಬುವವರೆಗೆ

ನನ್ನಲಿ ನೆಲೆ ನಿಲ್ಲುವವರೆಗೆ

__________________Rj ಪ್ರಭಾಕರ ಪ್ರಭು .

Tuesday, December 04, 2012

ಮಾಮರವು ಹಾಡಿದೆ




         ಮಾಮರವು ಹಾಡಿದೆ
         ಮನದ ನವಿಲೆದ್ದು ಕುಣಿದಿದೆ
         ಮರಳಿ ಬರುತಿರುವ
         ಮನದನ್ನೆಯ ಸಂದೇಶಕೆ

ಮೌನ ತಳೆದ ಜೀವ
ಮನಬಂದಂತೆ ಓಡಿದೆ
ಮುನಿಸಿ ಹೋಗಿದ್ದವಳ
ಮತ್ತೆ ಬರಮಾಡುತ
ಮಮತೆಯ ಕದ ತೆರೆದು
ಮಾನವತೆಯ ಹೂ ಹಾಸಿದೆ
ಮನದ ಬಾಗಿಲಲಿನಿಂತು
ಮರೆಮಾಸಿದೆ
ನೆನಪುಗಳ

-----------------Rj Prabhakar Prabhu.

ಕ್ಷಮಯಾಧರಿತ್ರಿ ನೀ




ನಾನೇನು ತಪ್ಪೂ ಮಾಡದೇ ನಿನ್ನಲ್ಲಿ ಕ್ಷಮೆ ಯಾಚಿಸಿದೆ
ತಪ್ಪು ನಡೆದಿದ್ದಲ್ಲಿ ಕ್ಷಮಯಾಧರಿತ್ರಿ ನೀ ಕ್ಷಮಿಸೆಂದು
ತೊರೆದು ಹೋದೆ ಮಾತಿನ ಜೊತೆ ಕ್ಷಮಿಸದೇ
ಹೇಳುವುದೇನೂ ಉಳಿದಿಲ್ಲ
ಕ್ಷಮಿಸಿ ಇರಲೆಂದು ನನಗೆ ಬದುಕಲು ಬಿಟ್ಟಿರುವ
ನೆಲೆಯಾಗಿರು ಎಂದು ನನ್ನನಿನ್ನೆಲ್ಲರ
ಪಾಪಿಯಲ್ಲದ ನನ್ನ
ಕ್ಷಮಿಸಿಲ್ಲದ ನಿನ್ನ
ನಡೆಯುತಿರುವೆ ಮಿತಿಮೀರಿ
ಎಡವಿದರೆ ನುಂಗುವೆನೆಂದಿಹಳುನಿನ್ನ
ಭೂದೇವಿ ........ ಜೋಕೆ .


____________Rj  ಪ್ರಭಾಕರ ಪ್ರಭು .

ಪ್ರೀತಿಯ ಅಂಗಳದಲ್ಲಿ



ಪ್ರೀತಿಯ ಅಂಗಳದಲ್ಲಿ
ಪ್ರೀತಿಗಾಗಿ ಕಾದಿರಲು
ಪ್ರೀತಿಯನ್ನು ಕಾಣಲೆಂದು
ಪ್ರೀತಿ ಸುತ್ತಾ ಸುತ್ತಿರಲು
ಪ್ರೀತಿಯೇ ಕೈಬೀಸಿ
ಪ್ರೀತಿಯಲಿ ಕರೆದಾಗ
ಪ್ರೀತಿಯ ಬಳಿಸೇರಿ
ಪ್ರೀತಿಯಿಂದಲಿ ಅವಳ
ಪ್ರೀತಿಯನು ಸ್ವೀಕರಿಸಿ
ಪ್ರೀತಿಸಿದ ಪ್ರೀತಿಗೆ
ಪ್ರೀತಿಯಲಿ ಕರಪಿಡಿದು
ಪ್ರೀತಿಸುತ್ತಲಿ ನಿಂತು
ಪ್ರೀತಿಸಿದ  ಈ ಪರಿಯ
ಪ್ರೀತಿಯೊಳು ಪೇಳುವೆನು .




-----------------Rj Prabhakar Prabhu.

ಅವಳದೆಷ್ಟು ಕ್ರೂರಿ



ವಳದೆಷ್ಟು ಕ್ರೂರಿ
ಕೈ ಕೊಟ್ಟಿದ್ದು ಮಾತ್ರವಲ್ಲ
ಪ್ರೀತಿಯ ಪದಗಳ ಲೂಟಿ ಮಾಡಿ
ಯೋಚಿಪ ಮನಸಿಗೆ ಮಂಕುಬೂದಿ ಎರಚಿ
ಅವಳ ಕುರಿತು ನಾ ಬರೆಯಬಾರದೆಂದು. . . .
ಕನಸೇ ಬರದವನಿಗೆ ಕನಸ ತೋರಿಸಿ
ನನಸಾಗಿಸೋ ಮೊದಲೇ ಹೊದ್ದು ಮಲಗಿಹಳು
ಕನಸಲ್ಲೂ ಸಾಲದ ಉಪಚರಿಸಿ
ಮನಸನ್ನೂ ಹೊತ್ತು ಒಯ್ದಿಹಳು. . .

__________________Rj ಪ್ರಭಾಕರ ಪ್ರಭು .