Search Blog

Tuesday, November 27, 2012

ಅಂದು ಇಂದು ಪ್ರೀತಿ



ಆ ದಿನದ ನಿನ್ನ ನಗು
ಈದಿನದ ನನ್ನ ಅಳುವಿಗೆ ಕಾರಣ

ನಿನ್ನೊಡನಿದ್ದೆ ಆದಿನ
ಏಕಾಂಗಿಯಂತಿರುವೆ ಈದಿನ

ಮಾತಾಡಿಸುತ್ತಿದ್ದೆ ನಿನ್ನ ನಾ
ಮೌನ ತಳೆದಿದೆ ನನ್ ಮನ

ಅಂದುಳಿದ ಪ್ರೀತಿಯ ಕಲೆ
ಇಂದು ನನ್ನ ಕೈಯ್ಯಾರೆ ನನ್ನ ಕೊಲೆ

ಪ್ರಣಯದಾಟವು ಆದಿನ
ಪ್ರಳಯದೂಟವು ಈಕ್ಷಣ

.................. RJ ಪ್ರಭಾಕರ ಪ್ರಭು.
 

Monday, November 26, 2012

ಪರಿಸ್ಥಿತಿಯ ವ್ಯಭಿಚಾರ



ಮರೆತಿರುವೆ ನಾನೆಂದು
ಅರಿತಿರುವೆ ನೀನಿಂದು
ಹೃದಯದ ಗೂಡಲ್ಲಿ
ಬಚ್ಚಿಟ್ಟು ಪೂಜಿಸುವೆ
ಇರುಳೆಲ್ಲ ಕನವರಿಸಿ
ಭಾವನೆಗಳ ಕಸ ಗುಡಿಸಿ
ಮರುಳನಂತೆ ನುಡಿಸುರಿಸಿ
ತೋರಣವ ಕಟ್ಟಿರುವೆ
ಜೀವನದ ಬಾಗಿಲಿಗೆ
ನೀನಿರುವ ಜಾಗಕೆ
ನನ್ನ ಹೃದಯದ ಭಾಗಕೆ
ಕರೆದೊಯ್ಯಲು ಬರುವೆ
ಕಷ್ಟಗಳ ತೊರೆಯುವೆ
ಪಾಪಿ ನಾನೆಂದು
ಭಾವಿಸದಿರು ನೀನಿಂದು
ನಿನ್ನವನೇ ನಾನೆಂದೂ
ಮರೆಯದಿರು ಎಂದೆಂದೂ
ಬರಡಾಗಿದೆ ಭಾವನೆಗಳು
ಕಾದಿಹವು ಕನಸುಗಳು
ನಿನ್ನುಸಿರ ಸಿಂಚನಕೆ
ಮಧುರಾಮೃತ ಸೋಪಾನಕೆ
ಮೈನೆರೆವ ಸಾಂದರ್ಭಕೆ
ಬಿಗಿಯಪ್ಪುಗೆಯ ಸಲ್ಲಾಪಕೆ
ಕಾದಿಹವು ಕಣ್ಣುಗಳು
ನಿನ್ನೊಲವಿನ ಕುಡಿನೋಟಕೆ
ನಿಮಿರುತಿವೆ ಕರಣಗಳು
ನಲುಮೆಯ ಚೆನ್ನುಡಿಗೆ
ನನ್ನವಯವಗಳು ಕೇಳಲಾರವು
ನಿನ್ನದಲ್ಲದ ನನ್ನ ಮಾತ
ಪರಿತಪಿಸಿ ಬೇಡುತಿಹೆ
ಪರಿಸ್ಥಿತಿಯ ವ್ಯಭಿಚಾರಕೆ.


.................. RJ ಪ್ರಭಾಕರ ಪ್ರಭು.

ಇಂತೀ ನಿನ್ನವಳು...ಚಿನ್ನ





ಕನಿಕರ ತೋರಿಸಿ 
ಕನಸಲ್ಲಿ ಬಾರೆಯಾ
ಕೈಹಿಡಿದು ನೀನನ್ನ 
 ನಡೆದಿದ್ದು ಮರೆತೆಯಾ
ಕರೆದಾಕ್ಷಣ ಕನಸಲ್ಲಿ 
ಬರುತಿದ್ದ ನೀನು
ಮೂರು ಮಾಸದ ಪ್ರೀತಿ 
 ಇನ್ನೂ ಮಾಸಿಲ್ಲ ಭೀತಿ
ಇಂದೇತಕೆ ಮರೆಯಾಗಿಹೆ
 ನಿನ್ನಿಹವ ಕಾಣ ಬಯಸಿಹೆ
ತಿಳಿಸದೇ ಹೋಗಿಹೆಯಾ 
ತಿಳಿಸಲೂ ಬರಲಾರೆಯಾ
ಚಡಪಡಿಕೆ ಅರಿಯಲಾರೆಯಾ
 

ಕಣ್ಮುಂದೆ ನಿಲಲಾರೆಯಾ
ಮನಸಿಂದ ತೊರೆದೆಯಾ
 ನಿನ್ನವಳ ಮರೆತೆಯಾ
ಕಾಣುತಿಹೆ ಕಣ್ಣ ಹನಿಯಲೂ 
ನಿನ್ನಾ...ನಗುವಿನ ಬಿಂಬ
 ಭಾವಗಳ ಸುಳಿಯಲ್ಲಿ 
 ಮೀಯುತಿಹೆ ದಿನವೆಲ್ಲ
ಕಾಲ್ಪನಿಕ ಜೀವನದಲ್ಲಿ 
 ಬೇಯುತಿಹೆ ಕ್ಷಣವೆಲ್ಲ
 ನಿನ್ನೊಂದಿಗಿರುವೆ ನಾನೆಂದು 
 ಪ್ರತಿಕ್ಷಣವೂ ನೆನೆನೆನೆದು
ನನ್ನವನು ನೀನೆಂದು 
 ಅಳುವೆಂಬ ಸುಳಿಯಲ್ಲಿ
 ಗಿರಗಿರನೆ ಸುತ್ತುತಿಹೆ 
ಇಹವ ತ್ಯಜಿಸುವ ಮುನ್ನ
ಕಾಣಲಾರೆನೇ ನಿನ್ನ
 ಬರುವೆಯಾ ನೋಡಲು ನನ್ನ
ಮರೆಯಲಾರೆ ನಾ ನಿನ್ನ
ಇರಲಾರೆನು ಬಿಟ್ಟು ನಿನ್ನ
ಇಂತೀ ನಿನ್ನವಳು...ಚಿನ್ನ

..........................................Rj ಪ್ರಭಾಕರ ಪ್ರಭು

ಅವಳು ಎಂದರೆ ನನಗೆ ಭಯ


ಅವಳು ಎಂದರೆ ನನಗೆ ಭಯ

ತಿರುಗಿ ಬರುವಳೆಂದಲ್ಲ
ಮೋಡಿ ಮಾಡುವಳೆಂದಲ್ಲ
ಇರುಳ ಕನಸಲಿ ಬರುವಳೆಂತಲ್ಲ
ಹಗಲು ಕನಸಲೂ ಕಾಡುವಳೆಂತಲ್ಲ

ಇನ್ನಾವ ವೇಷದೊಳು ಬರುವಳೆಂತೋ
ಅದಿನ್ಯಾವ ರೀತಿಯೊಳು ಕಾಂಬಳೆನಿತೋ
ಪರಿಯ ಪ್ರೀತಿಗೆ ಸಿಲುಕಲೆಂತೋ
ಮನಸು ಎಲ್ಲಿ ಸೆಳೆದಾಳೆಂತು .


.......Rj ಪ್ರಭಾಕರ ಪ್ರಭು .

Friday, November 23, 2012

ಪ್ರೀತಿಯ ಲೋಕದಲ್ಲಿ ಲವ್ ಪತಿ ಒಂದು ಸುತ್ತು

 
ಪ್ರೀತಿಯ ಲೋಕದಲ್ಲಿ ಲವ್ ಪತಿ ಒಂದು ಸುತ್ತು


                          ಭೂಲೊಕದಲ್ಲಿ ಪ್ರೀತಿಸುವ ಜೀವಿಗಳ ಪ್ರೀತಿ ಬಗೆಗಿರುವ ಹಲವಾರು ಅನುಮಾನ ಹಾಗೂ ಸಂದೇಹಗಳಿಗೆ ಉತ್ತರಿಸುವ ಸಲುವಾಗಿ ಜವಬ್ದಾರಿ ಹೊತ್ತು ಪ್ರೀತಿ ಲೋಕಕ್ಕೆ ಕಾಲಿಟ್ಟ ಲವ್ ಪತಿಯ ಪ್ರೀತಿ ಸಂದೇಷ ನಿಮ್ಮಲ್ಲಿಯವರೆಗೆ ತಲುಪುವುದೆಂತೋ ನಾಕಾಣೆ. ಇದನ್ನು ಓದಿದ ಮೇಲಂತೂ ಪ್ರೀತಿಸುವ ಪ್ರತಿಯೊಂದು ಜೀವಿಯೂ ಪ್ರೀತಿ ಲೋಕಕ್ಕೆ ಕಾಲಿಡಲು ಸಾಹಸ ಮಾಡಿದರೂ ಮಾಡಿಯಾರು ಅನ್ನುವುದರಲ್ಲಿ ಸಂದೇಹವಿಲ್ಲ.

          ಅದೇನೋ ವಿಚಿತ್ರ ವಾತಾವರಣ, ತಣ್ಣನೆಯ ಗಾಳಿ ಮೈಸೋಕಿ ಅಯಸ್ಕಾಂತಕ್ಕೆ ಕಬ್ಬಿಣವು ನಿಟಾರನೆ ಸೆಟೆದು ನಿಲ್ಲುವಂತೆ ರೋಮಾಂಚಿತವಾದ ಶರೀರವನ್ನು ಎಳೆದಾಡುತ್ತಾ ಮುಂದೆ ಸಾಗುತ್ತಿದ್ದೆ. ಹಕ್ಕಿಗಳ ಕಲರವದ ಜೊತೆಗೆ ದುಂಬಿಗಳ ಝೇಂಕಾರ ಎಲ್ಲೋ ಒಂದು ಕಡೆ ಸಂಗೀತ ಕಛೇರಿ ನಡೆಯುತ್ತಿದೆ ಅನ್ನುವನ್ತಿತ್ತು. ಎಲ್ಲವೂ ಮನಸ್ಸಿಗೆ ಮುದ ನೀಡುತ್ತಿತ್ತು. ಭೂಲೋಕದಲಿಲ್ಲದ, ನಾನೆಂದೂ ಕಂಡಿರದ, ಹೇಳತೀರದ ಒಂದು ವಿಚಿತ್ರ ಅನುಭವ. ಎಲ್ಲೆಲ್ಲೂ ಹಸಿರು ಹಸಿರಾಗಿ ಕಾಣುವ, ಪರಿಮಳ ಪುಷ್ಪಗಳು ಬಾಯಿಬಿಟ್ಟು ನಕ್ಕಂತೆ ಭಾಸವಗುವುದು. ಆ ಸಮಯದಲ್ಲಿ ಹೊರಹೊಮ್ಮುವ ಸುವಾಸನೆ ಅನ್ಯಲೊಕದಲ್ಲಿ ಕಾಣಸಿಗದು. ಕಾಲುಗಳೆರಡೂ ನೆಲವಲ್ಲದ ನೆಲವ ಸ್ಪರ್ಷಿಸಿವೆ ಅನ್ನುವಂತಿತ್ತು. ನಡೆವ ಹಾದಿಯಲಿ ಕಲ್ಲು ಮುಳ್ಳು ಗಳಿಲ್ಲದಿರುವುದು, ನೆಲದಲ್ಲಿ ಹೂವು ಚೆಲ್ಲದಿದ್ದರೂ ಹೂವಿನ ಹಾಸು ಹಾಸಿರುವಂತೆ ಮೃದುವಾದ ಅನುಭವವಾಗುತ್ತಿತ್ತು. ಆಶ್ಚರ್ಯ ಏನೆಂದರೆ ಸಕಲ ಜೀವಿಗಳೂ ನಗುತಿರುವುದು.

              ಪ್ರೀತಿಯ ಬಗೆಗಿನ ಹಲವಾರು ಪ್ರಶ್ನೆಗಳನ್ನು ಹೊತ್ತು ಉತ್ತರಕ್ಕಾಗಿ ಪ್ರೀತಿ ಲೊಕಕ್ಕೆ ಕಾಲಿಟ್ಟ ನನಗೆ ಏನೋ ಶಂಕೆ ಕಾಡುತ್ತಿತ್ತು. ಪ್ರೀತಿಸುವ ಜೀವಿಗಳಲ್ಲದೇ ಪ್ರೀತಿಗೂ ಒಂದು ಜೀವವಿದೆ ಅನ್ನ್ನುವುದು ಇಲ್ಲಿ ಬಂದಮೇಲೆ ನನಗೆ ತಿಳಿಯಿತು. ಆದರೆ ನನಗಿಲ್ಲಿ ಯಾವುದೇ ಭಾಷೆ ಬರಲಾರದು. ಅಥವಾ ನನ್ನ ಭಾಷೆಗೆ ಸ್ಪಂದಿಸುವ ಯಾರದರೂ ಸಿಕ್ಕರೆ ಚೆನ್ನ ಅಂತಿತ್ತು ನನ್ನ ಮನಸ್ಸು. ಅವರ ಜೊತೆ ಕಾಲ ಕಳೆಯುವುದರ ಜೊತೆಗೆ ನನ್ನ ಪ್ರಶ್ನೆಗಳಿಗೆ ಕಿಂಚಿತ್ತು ಉತ್ತರ ನೀಡುವವರಾಗಿದ್ದರೆ ಸಾಕಿತ್ತು. ತಲೆ ಸುತ್ತು ಬರುವಂತಿತ್ತು. ಯಾವುದೋ ಹೊಸ ಥರದ ಯೋಚನೆಗಳು ಬರಲಾರಂಭಿಸಿದವು.



Wednesday, November 21, 2012

ಮನಸಿಂದ ಮನನೊಂದವ



ಮನದಲ್ಲಿ ನೆಲೆಯೂರಿ
ಮಾನವೀಯತೆಯ ಸೆಲೆ ಹೀರಿ
ಮನುಷ್ಯತ್ವದ ಕರ ತೋರಿ
ಮನದೊಳಗೆ ಕಂಡೆ ದಾರಿ

ಮನೆವರೆಗೂ ಬರಮಾಡಿ
ಮನಬಂದಂತೆ ಮಾತನಾಡಿ
ಮನಕೊಪ್ಪದ ಜಗಳವಾಡಿ
ಮನಸಿಂದ ದೂರಮಾಡಿ

ಮನಫ್ಹಟಲದ ಚಿತ್ರವಾಗಿ
ಮನಮೆಚ್ಚುವ ಮಡದಿಯಾಗಿ
ಮನ್ ಮಥನಕೆ ನಾಂದಿಯಾಗಿ
ಮನ ಸ ಲ್ಲಾಪ ಲೋಪವಾಗಿ

ಮನದಿಂಗಿತ ತಿಳಿಸದೇ
ಮನ ಬಿಂಬವ ಅಳಿಸದೇ
ಮನಶ್ಯಾಂತಿಯ ಕದಡಿಸದೇ
ಮನಭಿಕ್ಷೆಗೆ ಕನಿಕರಿಸದೇ

ಮರಳದಿರು ಮತ್ತೆಂದೂ
ಮರುಳಾಗಿಸದಿರು ಎಂದೆಂದೂ
ಮಥಿಸದಿರು ನನ್ನನೆಂದೂ
ಮನ ನೊಂದಿಹೆ ನಾನಿಂದು.

------- Rj Prabhakar Prabhu

ಮರಳಿದ ಮನದನ್ನೆ



ಮರೆತಿರುವೆ ಎಂದರಿತಿದ್ದೆ
ಮಾತಿಲ್ಲದೇ ಮೌನಿಯಾಗಿದ್ದೆ
ಮನಸಿನಾಳದಲಿ ಮರೆಮಾಚಿ
ಮನಸ್ತಾಪದಲಿ ಮನಕೆಡಿಸಿ
ಮರೆತಂತಿದ್ದ ಮನವನ್ನು ಕದಡಿ
ಮತ್ತೆ ಬಂದಿರುವೆ
ಮನವರಿಕೆ ಮಾಡಿಸಲು
ಮರೆತಿರಲಿಲ್ಲ .....
ಮರೆಯಾಗಿದ್ದೆ
ಮನದಿಷ್ಟವ ಮರಳಿಪಡೆಯಲು
ಮನದಿಂಗಿತವ
ಮಾತಲ್ಲಿ ತಿಳಿಸಲು
ಮನದಂಗಳದಿ ನೆಲೆಯೂರಲು
ಮನಸಂಚಲಿ ಮನೆಮಾಡಲು
ಮರಳಿ ಮನವಿಚ್ಛಿಸಲು....
ಮಮಕಾರದಲಿ ಮನತುಡಿಸಲು
ಮನದಿರುಳಲಿ ಕನಸಾಗಲು
ಮನಸ್ತಾಪದ ಅರ್ಥೈಸಲು
ಮರುಳಾಗಿಸಿ
ಮನ ಕದಡಲು
ಮಹಾಸ್ವಪ್ನವ ಸತ್ಕರಿಸಲು
ಮತಿಭ್ರಮಣೆಗೆ ಸ್ಮೃತಿಯಾಗಲು
ಮಿಡಿತಕ್ಕೆ ಮನವೀಯಲು
ಮರಳಿದಳು ಮನದನ್ನೆ  .



------- Rj Prabhakar Prabhu

Tuesday, November 20, 2012

ಅಸೆ, ಆಕಾಂಕ್ಷೆ, ಬಯಕೆ

ಅಸೆ, ಆಕಾಂಕ್ಷೆ, ಬಯಕೆ. ಎಲ್ಲವೂ
ಗಾಜಿನ ಮೇಲೆ ಬರೆದ ಅಕ್ಷರಗಳಿದ್ದಂತೆ !!!

ಯಾವಾಗ? ಎಲ್ಲಿ ? ಯಾರು?
ಚೂರು ಮಾಡುವರೋ ತಿಳಿಯದು .

------- Rj Prabhakar Prabhu

Saturday, November 17, 2012

ಪ್ರೀತಿಯ ಪರಿ(ಧಿ)



ಪ್ರೀತಿಯ ಸುಳಿಯಲ್ಲಿ ಸಿಲುಕಿದ್ದಾಗ
ಅರ್ಥವಾಗಲಾರದು ಯಾವ ಮಾತು

ಹುಚ್ಚು ಪ್ರೀತಿ ಅವಳ ಮೇಲೆ
ನಸು ಕೋಪ ಮಾತಿನಲ್ಲಿ

ಮಾತು ಸರಿಯಿದ್ದರೂ
ಸುಳ್ಳೆಂಬ ಭ್ರಮೆಯಿಬ್ಬರಲೂ

ಗಡುವಿಲ್ಲದ ಪ್ರೀತಿಗೆ
ಏನು ಮಾಡಿದರೂ ಕಡಿಮೆ
ಆದರೂ
ಜಾಸ್ತಿಯಾಯ್ತು , ಓವರಾಯ್ತು
ಅನ್ನುತಿದ್ದಳವಳು

ನನ್ನ ಪ್ರೀತಿಲಿ ಅರ್ಥವಿತ್ತು

ಅರ್ಥವಾಗಿತ್ತು ಈಗ
ಓವರಾಗಿದ್ದೂ ನಿಜ
ನನ್ನ ವಳ ಪ್ರೀತಿಯಾಟದಲ್ಲಿ
ಶುರು ಮಾಡಿರುವಳೀಗ
ಇನ್ನೊಬ್ಬರಿಗೆ ಓವರ್


॥ Rj ಪ್ರಭಾಕರ ಪ್ರಭು ॥

Friday, November 16, 2012

ಕವಿ(ಪಿ)


"ಕವಿ" ಹಾದಿ ಹದಗೆಟ್ಟರೆ

"ಕಪಿ" ಯಾಗುವುದು ಖಚಿತ .

Thursday, November 15, 2012

ಪ್ರಥಮೋಲೆ .


ಬರೆದಿದ್ದೆ ನಿನ್ನ ಮೇಲೆ
ಪುಟ್ಟದೊಂದು ಪ್ರೇಮದ ಓಲೆ
ಮೊದಲ ಬಾರಿ ನಾ ನಿನ್ನ ಕಂಡ ಕೂಡಲೇ


ಸೇರಿತ್ತು ಅದು ಒಂದು ಮೂಲೆ
ಕೊನೆ ಬಾರಿ ನೀ ಸಿಕ್ಕಾಗಲೇ
ನೀ ನಿನ್ನಿನಿಯನ ಜೊತೆಗಿರುವಾಗಲೇ .


॥ Rj ಪ್ರಭಾಕರ ಪ್ರಭು ॥

Sunday, November 11, 2012

ತಾಳು ಮನವೇ


ತಿಳಿ ಸಂಜೆಯ ಆಗಸ, ತಂಗಾಳಿಯ ಇಂಪಾದ ಗಾನ,ಮಳೆ ಬರುವಂತೆ ಸೂಚಿಸುವ ವಾ ತಾವರಣ, ಇದೇ ವೇಳೆಮನೆ ತಲುಪುವವರ ಆತುರ, ಮಾರ್ಗ ಮಧ್ಯವಾಹನಗಳ ತೊಳಲಾಟ, ವಾಹನ ಸವಾರಿಗಿಂತ ನಡೆದುಕೊಂಡು ಹೋದರೆ ಬೇಗನೇ ತಲುಪಬಹುದೇನೋ ಎಂಬಂತೆ ಯೋಚನೆ ಕೆಲ ಜನರ ಮನದಲ್ಲ ಹಾಗೆಯೇನಾನೂ ಯೋಚಿಸುತ್ತಿರುವಾಗಲೇ ದಾರಿ ಸರಾಗವಾಗಿ ವಾಹನ ಸಂಚಾರ ಶುರುವಾಯಿತು . ತಿರುಗಿ ನೋಡುವಷ್ಟರಲ್ಲಿ ನಾ ಹೋಗೋ ದಾರಿಗೆ ಸಮನಾಗಿ ಒಂದು ಆಟೋ ನಿಧಾನವಾಗಿ ಬರತೊಡಗಿತು . ಬಸ್ಸಿನ ವ್ಯವಸ್ಥೆ ಅಷ್ಟೊಂದಿರಲಿಲ್ಲವಾದ್ದರಿಂದ ಮಳೆ ಬರುವ ಸೂಚನೆ ಇದ್ದದ್ದರಿಂದ ಅದನ್ನು (ಆಟೋ) ನಿಲ್ಲಿಸಬೇಕೆನ್ನುವಷ್ಟರಲ್ಲಿ ಅದಾಗದೇ ನನಗೆ ಶರಣಾಯಿತು . ಕ್ಷಣ ಚಕಿತನಾಗಿ ಒಳಗಡೆ ಕಣ್ಣು ಹಾಯಿಸಿದೆ . ಹಸಿರು ಸೀರೆ ಉಟ್ಟು , ಅದೇ ಬಣ್ಣದ ಬಳೆ ತೊಟ್ಟಿರುವ ಹೆಣ್ಣೊಂದು ಇಣುಕಿ "ಬನ್ನಿ" ಎಂದಳು . ನನ್ನ ಕಳವಳಏನೆಂದು ಅವಳಿಗೆ ತಿಳಿದು ಕರೆದಿರುವಳೇನೋ?!! ಆಟೋದವನ ಮುಖ ನೋಡಿದೆ . ಹತ್ತಿ ಅಂದ . ಇನ್ನೇಕೆ ಯೋಚನೆ ಅಂದುಕೊಂಡೇ ಹತ್ತಿ ಕುಳಿತೆ . ಅವಳು ಸರಿದುಕೊಳ್ಳುವಳು ಅಂತಿದ್ದ ನನ್ನ ಮನಸ್ಸಿನ ಮಾತು ಸುಳ್ಳಾಗಿತ್ತು . ಕೊಂಚ ದೂರದಲ್ಲೇ ಮತ್ತೊಬ್ಬರು ಆಟೋ ಹತ್ತಿದ್ದರಿಂದ ನಾನು ಕೊಂಚ ಸರಿಯಬೇಕಾಯಿತು . ಅವಳ ಪಕ್ಕದಲ್ಲಿ ಕುಳಿತ ನನ್ನ ಮುಖಕ್ಕೆ, ಮುಂದಕ್ಕೆ ಬಾಗಿ ಕುಳಿತ ಅವಳ ಕೂದಲ ಸ್ಪರ್ಷವಾಗುತ್ತಿತ್ತು . ನನ್ನ ಕಡೆ ತಿರುಗಿ ನೋಡಿದ ಆಕೆ ತನ್ನ ಮುಂಗುರುಳ ಹಿಂದೆ ಸರಿಸಿ ಮಂದನಗೆ ಬೀರಿದ್ದಳು . ನನ್ನ ಮನಸ್ಸೂ ಸುಮ್ಮನಿರಲಾರದೇ ಮುಗುಳ್ನಗೆಯಲ್ಲಿ ಕೊನೆ ಮಾಡಿತ್ತು . ಆಕೆ ಸುಮ್ಮನಿದ್ದರೂ ಅವಳ ಕುರುಳು ನನ್ನ ಮಾತಾಡಿಸುತ್ತಿದ್ದವು . ಅದರಿಂದ ಸೂಸಿದ ಕಂಪು ಮಾತ್ರ ನನ್ನ ಮೂಗಿಗೆ ಮುತ್ತಿಡುತ್ತಿದ್ದ ಮಾತು ಪರಮ ಸತ್ಯ . ಆ ಎರಡು ಕ್ಷಣಗಳು ಹೇಗೆ ಕಳೆಯಿತೆಂದೇ ತಿಳಿಯಲಾಗಿಲ್ಲ . ಇಳಿದು ಅವಳ ಬಳಿ ಮಾತನಾಡಬೇಕೆಂದುಕೊಂಡೆ . ಆಟೋಗೆ ಕಾಸು ಕೊಟ್ಟು ತಿರುಗುವಷ್ಟರಲ್ಲಿ ಮಾಯವಾಗಿದ್ದಳು ಆ ಚೆಲುವೆ . ಅವಳ ಮುಂಗುರುಳ ಸುವಾಸನೆ ಮಾತ್ರ ಇನ್ನೂಹಾಗೇ ಇದ್ದು, ನನ್ನ ಮನದಲ್ಲಿ ಹೊಸ ಲೋಕದ ಸೃಷ್ಟಿಗೆ ಕಾರಣವಾಗಿದೆಎನ್ನಬಹುದೇನೋ??


. ॥ Rj ಪ್ರಭಾಕರ ಪ್ರಭು ॥

Saturday, November 10, 2012

Nannavalalla Neenu

ಕನಸಲ್ಲಿ ಬಾರದಿರು
ನೆನಪಲ್ಲಿ ಕೂರದಿರು
ಮನಸನ್ನ ಕಾಡದಿರು
ನನ್ನಿಂದ ದೂರವಿರು


ಕಣ್ಮುಂದೆ ಸುಳಿಯದಿರು
ಮಾತಲ್ಲೇ ಬಣ್ಣವ ಬಳಿಯದಿರು
ನಿನ್ನಿಹವ ತಿಳಿಸದಿರು
ಮನದಿಂಗಿತ ಕಳಿಸದಿರು


ಏಕಾಂತವ ಮುರಿಯದಿರು
ಸಂತೋಷಕೆ ಕರೆಯದಿರು
ಸಂದೇಶವ ಬರೆಯದಿರು
ಸಂತಾಪ ತೋರದಿರು


ಗೋಗರೆದು ಬೇಡದಿರು
ಮೌನವನು ಕದಡದಿರು
ಬಾಳಿನ ಕದ ತಟ್ಟದಿರು
ನೊಂದವನ ನೋಯಿಸದಿರು


ಜೀವನದಲ್ಲಿ ಮರೆಯಾಗಿರು
ಮರೆಯಿಂದಲಿ ಇಣುಕದಿರು
ಪ್ರೇಮದಲಿ ಮುಲುಗದಿರು
ನನ್ನೊಲವಿಗೆ ಕನಿಕರಿಸದಿರು


ನನ್ನಿಷ್ಟಕೆ ಭಂಗ ತರದಿರು
ನಿನ್ನಷ್ಟಕೆ ನೀನಿರು
ನಾ ನಿನ್ನವನೆನ್ನದಿರು
ಈ ಜೀವಕೆ ಬೇಡವಾಗಿರು


॥ Rj Prabhakar Prabhu ॥

Friday, November 09, 2012

ಅಲ್ಲೋಲಾ ಕಲ್ಲೋಲಾ



            ಅಲ್ಲೋಲಾ ಕಲ್ಲೋಲಾ
ಮನಸ್ಸಲ್ಲಿ ಎಲ್ಲಾ
ನೀನಿಲ್ದೇ ಏನಿಲ್ಲಾ
ಓ ಎನ್ನ ಲೀಲಾ
ಮುತ್ತಿಟ್ಟೊಡೋಗಲ್ಲಾ
ಕೊಡುತೀಯಾ ಗಲ್ಲಾ

ನಾನೇ ಕಣೇ ನಿನ್ ನಲ್ಲಾ
ನಾಚ್ಕೋತಿದಿಯಲ್ಲಾ
ಸಾಕೀಗ ಅಂತ್ಯಲ್ಲಾ
ಶುರುಮಾಡೇ ಇಲ್ಲಾ
ನಿನಗ್ಯಾಕೆ ಮನಸ್ಸಿಲ್ಲಾ
ಕಲ್ಲಾದೆಯಲ್ಲಾ

ಸಂಕೋಚವೆಂಬುದೆನಗಿಲ್ಲಾ
ಸಂತಾಪ ತೋರುತಿಹೆಯಲ್ಲಾ
ಆಗಸದಂತೆ ನೀ ಲೀಲಾ
ಬಣ್ಣವೊಂದೇ ತಿಳಿ ನೀಲಾ
ಆದರೂ ಕದಡಿಹೆಯಲ್ಲಾ
ಬಂದು ಬಾಳಲ್ಲೆಲ್ಲಾ...

ಸಿಂಪಲ್ ಸ್ಟೋರಿ ..... ರೀ(ಯ)ಲ್

                        
                    ಬೆಳಗಾಗೆದ್ದು ನಿತ್ಯ ಕರ್ಮಾದಿಗಳನ್ನು ಮುಗಿಸಿ ಮನೆಯಾಚೆ ನಿಂತು ಸುಮ್ಮನೆ ಸುತ್ತಲೂ ಕಣ್ಣು ಹಾಯಿಸುತ್ತಿರಲು, ಬಲಗಡೆ ಮನೆಯ ಮುಂದಿರುವ ರಂಗವಲ್ಲಿ ನನ್ನ ಕಣ್ಣು ಕುಕ್ಕಿತು. ಅದೇನೋ ಹೊಸದರಂತೇನೂ ಕಂಡಿಲ್ಲವಾದರೂ ಹೊಸ ಆವಿಷ್ಕಾರವೇನೋ ಅನ್ನುವಂತಿತ್ತು. ಅದೇನು ಅಂತ್ತೀರಾ? ಅರ್ಧ ಬಿಡಿಸಿದ ರಂಗೋಲಿ,, ಪಕ್ಕದಲ್ಲಿ ಪೂರ್ತಿ ಚೆಲ್ಲಿದ ರಂಗೋಲಿ ಪುಡಿ. ನಸು ನಗೆ ಮೂಡಿತ್ತಾದರೂ ಬೇಸರದ ಛಾಯೆ ಒಳಗೊಳಗೆ.

                        ಇನ್ನೇನು ಕಣ್ಣುಬೇರೆಡೆಗೆ ತಿರುಗ ಬೇಕು ಅನ್ನುವಷ್ಟರಲ್ಲಿ ಎಡಗಡೆಯಿಂದ ಒಂದು ಸ್ಕೂಟಿ ಬಂದು ಸರಕ್ಕನೆ ಪಕ್ಕದ ಮನೆಯ ರಂಗವಲ್ಲಿಯ ಮೇಲೆ ನಿಂತಿತು. ಚೆಲ್ಲಿದ್ದ ಪುಡಿ ಮೇಲೆಯೇ ಅದರ ಸ್ಟಾಂಡ್ ಇಳಿಸಿ, ಮೈಗೆ ನೋವಾಗುವುದೇನಅನ್ನುವಂತೆ ನಿಧಾನವಾಗಿಳಿದಿದ್ದಳು ಆ ಮನೆಯ ಹುಡುಗಿ. ನನ್ನ ಕಡೆ ನೋಡಿದಾಗಲೇ ತುಂಟ ನಗೆಯೊಂದು ಅವಳಲ್ಲಿ ಬಂದು ಮರೆಯಾಗಿತ್ತು. ನಾನಂದುಕೊಂಡೆ ರಂಗವಲ್ಲಿಯ ಚಿತ್ತಾರ ಇವಳದ್ದಿರಬೇಕು ಎಂದು. ಏನು? ಎನ್ನುವಂತೆ ಕಣ್ಣಿನಲ್ಲಿಯೇ ವಿಚಾರಿಸಿದೆ. ಅವಳಿಗೆ ನಾ ಕೇಳಿರೋದು ಅರ್ಥವಾಗಿರಲಿಲ್ಲವೇನೋ ಕಂಬಳಿ ಹುಳುವಿನ ನಡೆಯನ್ನು ತಿಳಿಸುವಂತನ್ನ ಕೈಬೆರಳನ್ನು ಬೋರಲಾಗಿಸಿ ಮತ್ತೆ ತುಸು ದನಿಯಲ್ಲಿ ನುಡಿದಳಾಕೆ "ವಾಕಿಂಗ್ ಹೋಗಿದ್ದೆ". ತುಸು ಚಕಿತನಾದಂತೆ ಮತ್ತೆ ಕೇಳಿದೆ "ಗಾಡಿ ತಗೊಂಡಾ?" ಅಷ್ಟರಲ್ಲಿ ಮನೆಯೊಳಗಡೆ ಕಾಲೂರಿದ್ದಳು ಚೆಲುವೆ.

                        ವಾಕಿಂಗ್ ಗಾಡಿ ಮೇಲೂ ಹೋಗಬಹುದೇನೋ? ಅಂದುಕೊಳ್ಳುತ್ತಾ ನಡೆದ ಸಂಗತಿಯ ನಿಮ್ಮ ಜೊತೆ ಹಂಚಿಕೊಳ್ಳಲು ಇಲ್ಲಿ ಬರೆದಿರುವೆ. ಶುಭದಿನ.


                                                                                                     ॥ RJ Prabhakar Prabhu ॥

Sunday, November 04, 2012

ಕನಸಿನ ಜೊತೆ ಮನಸು



 ಕನಸಲ್ಲಿ ಸಂಧಿಸಿ 
ಮನಸಲ್ಲಿ ಬಂಧಿಸಿ 
ನೀನಿರುವ ಇಹವ ಅರಿಯದಾದೆ ನಾನೀ ....ಲೋಕದೊಳು  


ದಿನವೆಲ್ಲ ಕಾಡಿಸಿ 
ಕ್ಷಣಕ್ಷಣವೂ ಪೀಡಿಸಿ 
ನಾನಿರುವ ರೀತಿಯನು ತಿಳಿಸಲೆಂತು..... ಪ್ರೀತಿಯೊಳು


......................................Rj Prabhakar Prabhu.

Friday, November 02, 2012

ನಿನ್ನ ಕುರಿತು | |





¸ÀzÁ ¤£ÀßzÉà zsÁå£À
C0vÉãÀÆ C®è
¤£Àß ©lÄÖ ¨ÉÃgÉãÀÆ
£É£À¥ÁUÉÆîè CµÉÖÃ

              ¤£Àß §UÉΣÉà ¥ÀzÀå
§jwä CavÀ®è
§gÉzÀ ¥ÀzÀåzÀ¯Éè¯Áè
£ÉäwÃðAiÀiÁ CµÉÖÃ

PàtÄäaÑ ¢£Á £Á£ÀÄ
¤zÉÝ ªÀiÁrÛä CAvÀ®è
PÀtÂâlÖgÉ ªÀiÁAiÀĪÁVÛÃAiÀiÁ
C£ÉÆßà ¨sÀAiÀÄ CµÉÖÃ

              ¤£Àß ©lÄÖ £À£ÀUÉ
¨Á¼ÉÆÃPÁUÀ®è CAvÀ®è
CxÀð«®èzÉà ¨Á¼À¨ÉÃPÀ¯Áè
C£ÉÆßà ¨ÉÃeÁgÀÄCµÉÖÃ

--------------  RJ  ¥Àæ¨sÁPÀgÀ ¥Àæ¨sÀÄ.