Search Blog

Friday, November 23, 2012

ಪ್ರೀತಿಯ ಲೋಕದಲ್ಲಿ ಲವ್ ಪತಿ ಒಂದು ಸುತ್ತು

 
ಪ್ರೀತಿಯ ಲೋಕದಲ್ಲಿ ಲವ್ ಪತಿ ಒಂದು ಸುತ್ತು


                          ಭೂಲೊಕದಲ್ಲಿ ಪ್ರೀತಿಸುವ ಜೀವಿಗಳ ಪ್ರೀತಿ ಬಗೆಗಿರುವ ಹಲವಾರು ಅನುಮಾನ ಹಾಗೂ ಸಂದೇಹಗಳಿಗೆ ಉತ್ತರಿಸುವ ಸಲುವಾಗಿ ಜವಬ್ದಾರಿ ಹೊತ್ತು ಪ್ರೀತಿ ಲೋಕಕ್ಕೆ ಕಾಲಿಟ್ಟ ಲವ್ ಪತಿಯ ಪ್ರೀತಿ ಸಂದೇಷ ನಿಮ್ಮಲ್ಲಿಯವರೆಗೆ ತಲುಪುವುದೆಂತೋ ನಾಕಾಣೆ. ಇದನ್ನು ಓದಿದ ಮೇಲಂತೂ ಪ್ರೀತಿಸುವ ಪ್ರತಿಯೊಂದು ಜೀವಿಯೂ ಪ್ರೀತಿ ಲೋಕಕ್ಕೆ ಕಾಲಿಡಲು ಸಾಹಸ ಮಾಡಿದರೂ ಮಾಡಿಯಾರು ಅನ್ನುವುದರಲ್ಲಿ ಸಂದೇಹವಿಲ್ಲ.

          ಅದೇನೋ ವಿಚಿತ್ರ ವಾತಾವರಣ, ತಣ್ಣನೆಯ ಗಾಳಿ ಮೈಸೋಕಿ ಅಯಸ್ಕಾಂತಕ್ಕೆ ಕಬ್ಬಿಣವು ನಿಟಾರನೆ ಸೆಟೆದು ನಿಲ್ಲುವಂತೆ ರೋಮಾಂಚಿತವಾದ ಶರೀರವನ್ನು ಎಳೆದಾಡುತ್ತಾ ಮುಂದೆ ಸಾಗುತ್ತಿದ್ದೆ. ಹಕ್ಕಿಗಳ ಕಲರವದ ಜೊತೆಗೆ ದುಂಬಿಗಳ ಝೇಂಕಾರ ಎಲ್ಲೋ ಒಂದು ಕಡೆ ಸಂಗೀತ ಕಛೇರಿ ನಡೆಯುತ್ತಿದೆ ಅನ್ನುವನ್ತಿತ್ತು. ಎಲ್ಲವೂ ಮನಸ್ಸಿಗೆ ಮುದ ನೀಡುತ್ತಿತ್ತು. ಭೂಲೋಕದಲಿಲ್ಲದ, ನಾನೆಂದೂ ಕಂಡಿರದ, ಹೇಳತೀರದ ಒಂದು ವಿಚಿತ್ರ ಅನುಭವ. ಎಲ್ಲೆಲ್ಲೂ ಹಸಿರು ಹಸಿರಾಗಿ ಕಾಣುವ, ಪರಿಮಳ ಪುಷ್ಪಗಳು ಬಾಯಿಬಿಟ್ಟು ನಕ್ಕಂತೆ ಭಾಸವಗುವುದು. ಆ ಸಮಯದಲ್ಲಿ ಹೊರಹೊಮ್ಮುವ ಸುವಾಸನೆ ಅನ್ಯಲೊಕದಲ್ಲಿ ಕಾಣಸಿಗದು. ಕಾಲುಗಳೆರಡೂ ನೆಲವಲ್ಲದ ನೆಲವ ಸ್ಪರ್ಷಿಸಿವೆ ಅನ್ನುವಂತಿತ್ತು. ನಡೆವ ಹಾದಿಯಲಿ ಕಲ್ಲು ಮುಳ್ಳು ಗಳಿಲ್ಲದಿರುವುದು, ನೆಲದಲ್ಲಿ ಹೂವು ಚೆಲ್ಲದಿದ್ದರೂ ಹೂವಿನ ಹಾಸು ಹಾಸಿರುವಂತೆ ಮೃದುವಾದ ಅನುಭವವಾಗುತ್ತಿತ್ತು. ಆಶ್ಚರ್ಯ ಏನೆಂದರೆ ಸಕಲ ಜೀವಿಗಳೂ ನಗುತಿರುವುದು.

              ಪ್ರೀತಿಯ ಬಗೆಗಿನ ಹಲವಾರು ಪ್ರಶ್ನೆಗಳನ್ನು ಹೊತ್ತು ಉತ್ತರಕ್ಕಾಗಿ ಪ್ರೀತಿ ಲೊಕಕ್ಕೆ ಕಾಲಿಟ್ಟ ನನಗೆ ಏನೋ ಶಂಕೆ ಕಾಡುತ್ತಿತ್ತು. ಪ್ರೀತಿಸುವ ಜೀವಿಗಳಲ್ಲದೇ ಪ್ರೀತಿಗೂ ಒಂದು ಜೀವವಿದೆ ಅನ್ನ್ನುವುದು ಇಲ್ಲಿ ಬಂದಮೇಲೆ ನನಗೆ ತಿಳಿಯಿತು. ಆದರೆ ನನಗಿಲ್ಲಿ ಯಾವುದೇ ಭಾಷೆ ಬರಲಾರದು. ಅಥವಾ ನನ್ನ ಭಾಷೆಗೆ ಸ್ಪಂದಿಸುವ ಯಾರದರೂ ಸಿಕ್ಕರೆ ಚೆನ್ನ ಅಂತಿತ್ತು ನನ್ನ ಮನಸ್ಸು. ಅವರ ಜೊತೆ ಕಾಲ ಕಳೆಯುವುದರ ಜೊತೆಗೆ ನನ್ನ ಪ್ರಶ್ನೆಗಳಿಗೆ ಕಿಂಚಿತ್ತು ಉತ್ತರ ನೀಡುವವರಾಗಿದ್ದರೆ ಸಾಕಿತ್ತು. ತಲೆ ಸುತ್ತು ಬರುವಂತಿತ್ತು. ಯಾವುದೋ ಹೊಸ ಥರದ ಯೋಚನೆಗಳು ಬರಲಾರಂಭಿಸಿದವು.