Search Blog

Sunday, November 11, 2012

ತಾಳು ಮನವೇ


ತಿಳಿ ಸಂಜೆಯ ಆಗಸ, ತಂಗಾಳಿಯ ಇಂಪಾದ ಗಾನ,ಮಳೆ ಬರುವಂತೆ ಸೂಚಿಸುವ ವಾ ತಾವರಣ, ಇದೇ ವೇಳೆಮನೆ ತಲುಪುವವರ ಆತುರ, ಮಾರ್ಗ ಮಧ್ಯವಾಹನಗಳ ತೊಳಲಾಟ, ವಾಹನ ಸವಾರಿಗಿಂತ ನಡೆದುಕೊಂಡು ಹೋದರೆ ಬೇಗನೇ ತಲುಪಬಹುದೇನೋ ಎಂಬಂತೆ ಯೋಚನೆ ಕೆಲ ಜನರ ಮನದಲ್ಲ ಹಾಗೆಯೇನಾನೂ ಯೋಚಿಸುತ್ತಿರುವಾಗಲೇ ದಾರಿ ಸರಾಗವಾಗಿ ವಾಹನ ಸಂಚಾರ ಶುರುವಾಯಿತು . ತಿರುಗಿ ನೋಡುವಷ್ಟರಲ್ಲಿ ನಾ ಹೋಗೋ ದಾರಿಗೆ ಸಮನಾಗಿ ಒಂದು ಆಟೋ ನಿಧಾನವಾಗಿ ಬರತೊಡಗಿತು . ಬಸ್ಸಿನ ವ್ಯವಸ್ಥೆ ಅಷ್ಟೊಂದಿರಲಿಲ್ಲವಾದ್ದರಿಂದ ಮಳೆ ಬರುವ ಸೂಚನೆ ಇದ್ದದ್ದರಿಂದ ಅದನ್ನು (ಆಟೋ) ನಿಲ್ಲಿಸಬೇಕೆನ್ನುವಷ್ಟರಲ್ಲಿ ಅದಾಗದೇ ನನಗೆ ಶರಣಾಯಿತು . ಕ್ಷಣ ಚಕಿತನಾಗಿ ಒಳಗಡೆ ಕಣ್ಣು ಹಾಯಿಸಿದೆ . ಹಸಿರು ಸೀರೆ ಉಟ್ಟು , ಅದೇ ಬಣ್ಣದ ಬಳೆ ತೊಟ್ಟಿರುವ ಹೆಣ್ಣೊಂದು ಇಣುಕಿ "ಬನ್ನಿ" ಎಂದಳು . ನನ್ನ ಕಳವಳಏನೆಂದು ಅವಳಿಗೆ ತಿಳಿದು ಕರೆದಿರುವಳೇನೋ?!! ಆಟೋದವನ ಮುಖ ನೋಡಿದೆ . ಹತ್ತಿ ಅಂದ . ಇನ್ನೇಕೆ ಯೋಚನೆ ಅಂದುಕೊಂಡೇ ಹತ್ತಿ ಕುಳಿತೆ . ಅವಳು ಸರಿದುಕೊಳ್ಳುವಳು ಅಂತಿದ್ದ ನನ್ನ ಮನಸ್ಸಿನ ಮಾತು ಸುಳ್ಳಾಗಿತ್ತು . ಕೊಂಚ ದೂರದಲ್ಲೇ ಮತ್ತೊಬ್ಬರು ಆಟೋ ಹತ್ತಿದ್ದರಿಂದ ನಾನು ಕೊಂಚ ಸರಿಯಬೇಕಾಯಿತು . ಅವಳ ಪಕ್ಕದಲ್ಲಿ ಕುಳಿತ ನನ್ನ ಮುಖಕ್ಕೆ, ಮುಂದಕ್ಕೆ ಬಾಗಿ ಕುಳಿತ ಅವಳ ಕೂದಲ ಸ್ಪರ್ಷವಾಗುತ್ತಿತ್ತು . ನನ್ನ ಕಡೆ ತಿರುಗಿ ನೋಡಿದ ಆಕೆ ತನ್ನ ಮುಂಗುರುಳ ಹಿಂದೆ ಸರಿಸಿ ಮಂದನಗೆ ಬೀರಿದ್ದಳು . ನನ್ನ ಮನಸ್ಸೂ ಸುಮ್ಮನಿರಲಾರದೇ ಮುಗುಳ್ನಗೆಯಲ್ಲಿ ಕೊನೆ ಮಾಡಿತ್ತು . ಆಕೆ ಸುಮ್ಮನಿದ್ದರೂ ಅವಳ ಕುರುಳು ನನ್ನ ಮಾತಾಡಿಸುತ್ತಿದ್ದವು . ಅದರಿಂದ ಸೂಸಿದ ಕಂಪು ಮಾತ್ರ ನನ್ನ ಮೂಗಿಗೆ ಮುತ್ತಿಡುತ್ತಿದ್ದ ಮಾತು ಪರಮ ಸತ್ಯ . ಆ ಎರಡು ಕ್ಷಣಗಳು ಹೇಗೆ ಕಳೆಯಿತೆಂದೇ ತಿಳಿಯಲಾಗಿಲ್ಲ . ಇಳಿದು ಅವಳ ಬಳಿ ಮಾತನಾಡಬೇಕೆಂದುಕೊಂಡೆ . ಆಟೋಗೆ ಕಾಸು ಕೊಟ್ಟು ತಿರುಗುವಷ್ಟರಲ್ಲಿ ಮಾಯವಾಗಿದ್ದಳು ಆ ಚೆಲುವೆ . ಅವಳ ಮುಂಗುರುಳ ಸುವಾಸನೆ ಮಾತ್ರ ಇನ್ನೂಹಾಗೇ ಇದ್ದು, ನನ್ನ ಮನದಲ್ಲಿ ಹೊಸ ಲೋಕದ ಸೃಷ್ಟಿಗೆ ಕಾರಣವಾಗಿದೆಎನ್ನಬಹುದೇನೋ??


. ॥ Rj ಪ್ರಭಾಕರ ಪ್ರಭು ॥