Search Blog

Friday, November 09, 2012

ಸಿಂಪಲ್ ಸ್ಟೋರಿ ..... ರೀ(ಯ)ಲ್

                        
                    ಬೆಳಗಾಗೆದ್ದು ನಿತ್ಯ ಕರ್ಮಾದಿಗಳನ್ನು ಮುಗಿಸಿ ಮನೆಯಾಚೆ ನಿಂತು ಸುಮ್ಮನೆ ಸುತ್ತಲೂ ಕಣ್ಣು ಹಾಯಿಸುತ್ತಿರಲು, ಬಲಗಡೆ ಮನೆಯ ಮುಂದಿರುವ ರಂಗವಲ್ಲಿ ನನ್ನ ಕಣ್ಣು ಕುಕ್ಕಿತು. ಅದೇನೋ ಹೊಸದರಂತೇನೂ ಕಂಡಿಲ್ಲವಾದರೂ ಹೊಸ ಆವಿಷ್ಕಾರವೇನೋ ಅನ್ನುವಂತಿತ್ತು. ಅದೇನು ಅಂತ್ತೀರಾ? ಅರ್ಧ ಬಿಡಿಸಿದ ರಂಗೋಲಿ,, ಪಕ್ಕದಲ್ಲಿ ಪೂರ್ತಿ ಚೆಲ್ಲಿದ ರಂಗೋಲಿ ಪುಡಿ. ನಸು ನಗೆ ಮೂಡಿತ್ತಾದರೂ ಬೇಸರದ ಛಾಯೆ ಒಳಗೊಳಗೆ.

                        ಇನ್ನೇನು ಕಣ್ಣುಬೇರೆಡೆಗೆ ತಿರುಗ ಬೇಕು ಅನ್ನುವಷ್ಟರಲ್ಲಿ ಎಡಗಡೆಯಿಂದ ಒಂದು ಸ್ಕೂಟಿ ಬಂದು ಸರಕ್ಕನೆ ಪಕ್ಕದ ಮನೆಯ ರಂಗವಲ್ಲಿಯ ಮೇಲೆ ನಿಂತಿತು. ಚೆಲ್ಲಿದ್ದ ಪುಡಿ ಮೇಲೆಯೇ ಅದರ ಸ್ಟಾಂಡ್ ಇಳಿಸಿ, ಮೈಗೆ ನೋವಾಗುವುದೇನಅನ್ನುವಂತೆ ನಿಧಾನವಾಗಿಳಿದಿದ್ದಳು ಆ ಮನೆಯ ಹುಡುಗಿ. ನನ್ನ ಕಡೆ ನೋಡಿದಾಗಲೇ ತುಂಟ ನಗೆಯೊಂದು ಅವಳಲ್ಲಿ ಬಂದು ಮರೆಯಾಗಿತ್ತು. ನಾನಂದುಕೊಂಡೆ ರಂಗವಲ್ಲಿಯ ಚಿತ್ತಾರ ಇವಳದ್ದಿರಬೇಕು ಎಂದು. ಏನು? ಎನ್ನುವಂತೆ ಕಣ್ಣಿನಲ್ಲಿಯೇ ವಿಚಾರಿಸಿದೆ. ಅವಳಿಗೆ ನಾ ಕೇಳಿರೋದು ಅರ್ಥವಾಗಿರಲಿಲ್ಲವೇನೋ ಕಂಬಳಿ ಹುಳುವಿನ ನಡೆಯನ್ನು ತಿಳಿಸುವಂತನ್ನ ಕೈಬೆರಳನ್ನು ಬೋರಲಾಗಿಸಿ ಮತ್ತೆ ತುಸು ದನಿಯಲ್ಲಿ ನುಡಿದಳಾಕೆ "ವಾಕಿಂಗ್ ಹೋಗಿದ್ದೆ". ತುಸು ಚಕಿತನಾದಂತೆ ಮತ್ತೆ ಕೇಳಿದೆ "ಗಾಡಿ ತಗೊಂಡಾ?" ಅಷ್ಟರಲ್ಲಿ ಮನೆಯೊಳಗಡೆ ಕಾಲೂರಿದ್ದಳು ಚೆಲುವೆ.

                        ವಾಕಿಂಗ್ ಗಾಡಿ ಮೇಲೂ ಹೋಗಬಹುದೇನೋ? ಅಂದುಕೊಳ್ಳುತ್ತಾ ನಡೆದ ಸಂಗತಿಯ ನಿಮ್ಮ ಜೊತೆ ಹಂಚಿಕೊಳ್ಳಲು ಇಲ್ಲಿ ಬರೆದಿರುವೆ. ಶುಭದಿನ.


                                                                                                     ॥ RJ Prabhakar Prabhu ॥